ಮಾಜಿ ಸಚಿವ ವಿನಯ ಕುಲಕರ್ಣಿ ಸಿಬಿಐ ವಶಕ್ಕೆ

0
195

ಧಾರವಾಡ ನ.05: ಧಾರವಾಡದ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ ಕುಲಕರ್ಣಿ ಹಾಗೂ ಅವರ ಸಹೋದರ ವಿಜಯ ಕುಲಕರ್ಣಿ ಅವರನ್ನು ಸಿಬಿಐ ವಶಕ್ಕೆ ಪಡೆದಿದೆ.

2016ರಲ್ಲಿ ಯೋಗೀಶ್ ಗೌಡ ಅವರನ್ನು ಧಾರವಾಡ ನಗರದ ಸಪ್ತಾಪೂರ ಜಿಮ್ ಗೆ ಬಂದಿದ್ದ ದುಷ್ಕರ್ಮಿಗಳು ಯೋಗೇಶ ಗೌಡನನ್ನು ಮಚ್ಚಿನಿಂದ ಬರ್ಬರವಾಗಿ ಕೊಲೆಗೈದಿದ್ದರು. ಈ ದೃಶ್ಯವು ಜಿಮ್ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಯೋಗೀಶ್ ಗೌಡರನ್ನು ಕೊಲೆ ಮಾಡಲು ವಿನಯ ಕುಲಕರ್ಣಿ ಸಂಚು ರೂಪಿಸಿದ್ದಾರೆ ಎನ್ನುವ ಪತ್ರ ಕೊಲೆಗೆ ಕೆಲವು ದಿನ ಮೊದಲೇ ಬಂದಿತ್ತು. ನಂತರ ಕೊಲೆ ನಡೆದಾಗ ಇದು ಜಮೀನು ವ್ಯಾಜಕ್ಕೆ ಸಂಬಂಧಿಸಿದ ಕೊಲೆ ಎಂದು ತಿರುಚುವ ಪ್ರಯತ್ನ ನಡೆದಿತ್ತು.

ಯೋಗಾಶ್ ಗೌಡರ ಪತ್ನಿ ಮಲ್ಲಮ್ಮ ಮೊದಲು ವಿನಯ ಕುಲಕರ್ಣಿ ಮೇಲೆ ಆರೋಪ ಮಾಡಿದ್ದರು. ನಂತರದಲ್ಲಿ ಅವರು ಕಾಂಗ್ರೆಸ್ ಸೇರಿ, ವಿನಯ ಕುಲಕರ್ಣಿ ಮೇಲಿನ ಆರೋಪವನ್ನು ವಾಪಸ್ ಪಡೆದಿದ್ದರು. ಆದರೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲಾಗಿತ್ತು.

ತೀವ್ರ ವಿಚಾರಣೆ ನಡೆಸುತ್ತಿರುವ ಸಿಬಿಐ ಇದೀಗ ವಿನಯ ಕುಲಕರ್ಣಿಯನ್ನು ಮತ್ತು ಅವರ ಸಹೋದರರನ್ನು ವಶಕ್ಕೆ ಪಡೆದಿದೆ. ಇಂದು ಬೆಳಗ್ಗೆ 6.30ರ ಹೊತ್ತಿಗೆ ವಿನಯ ಕುಲಕರ್ಣಿ ಮನೆಗೆ ಬಂದ ಸಿಬಿಐ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದಿದೆ.


 

LEAVE A REPLY

Please enter your comment!
Please enter your name here