ಕರೋನಾ ಭೀತಿ ಭೂತ

0
281
ರವೀಂದ್ರ ಎನ್ ಎಸ್ - ಲೇಖಕರು

ಭಯ ಒಂದು ಹಂತದ ವರೆಗೆ ಒಳ್ಳೆಯದೇ ಆದರೇ ತೀರ ಅತೀಯಾದ ಭಯ ಕ್ಷಣ ಕ್ಷಣವೂ ಸಾಯಿಸುತ್ತದೆ. ಹಳ್ಳಿ ಕಡೆಗಳಲ್ಲಿನ ಜನ ಸಾಮಾನ್ಯವಾಗಿ ಅಪಾಯದಲ್ಲಿ ಸಿಕ್ಕು ಪಾರಾದಾಗ ” ಯಪ್ಪ ಸತ್ ಬದುಕಿದ್ನೋ ” ಎನ್ನುವ ಉದ್ಗಾರ ತಗಿಯೋದು ಕಾಮನ್ನು. ಜನ ಯಾವಾಗ್ಲೋ ಅಪಾಯದಲ್ಲಿ ಸಿಲುಕಿ ಹೊರ ಬಂದಾಗ ಮಾತ್ರ ತೆಗೆಯುತ್ತಿದ್ದ ಈ ಉದ್ಗಾರ ಕರೋನ ವಿಷಯದಲ್ಲಿ ಜನಗಳ ನಿತ್ಯದ ಮಂತ್ರವಾಗಿದೆ.

ಕೋವಿಡ್ 19 ವಿಚಾರದಲ್ಲಿ ಆರಂಭದ ದಿನಗಳಲ್ಲೇ ಮುಂಜಾಗರೂಕತಾ ಕ್ರಮ‌ ಕೈಗೊಳ್ಳದ ಸರ್ಕಾರಗಳು ದೀಪ ಹಚ್ಚಿ.ಚಪ್ಪಾಳೆ ತಟ್ಟಿ ಎನ್ನುವ ತೀರ ಬಾಲೀಶ್ ಟಾಸ್ಕ?ಳನ್ನ ಜನಗಳ ಮುಂದಿಟ್ಟು ಕರೋನ ಎನ್ನುವ ರೋಗವನ್ನು ದೇಶದ ಹಬ್ಬ ಮಾಡಿದ್ದು ನಿಜಕ್ಕೂ ಹುಚ್ಚುತನದ ಪರಮಾವಧಿ. ಮಾರ್ಚ ತಿಂಗಳಲ್ಲಿ ಮಾಡಿದ ವರದಿ (ಯಾರು ಹೊಣೆ?)ಓದಿರುವ ಬಹಳಷ್ಟು ಓದುಗರಿಗೆ ಅದರಲ್ಲಿ ” ಮುಂಬರುವ ದಿನಗಳಲ್ಲಿ ಭಾರತದ ಜನ ಡೆಂಗ್ಯೂ, ಚಿಕೂನ್ ಗೂನ್ಯ. ಮಲೇರಿಯಾ ರೋಗಗಳಂತೆ ಅಡ್ಜೆಸ್ಟ್ ಆಗಿ ಬದುಕಲೇ ಬೇಕಾಗುತ್ತೆ” ಎನ್ನುವ ಅಂಶ ನೆನಪಿದ್ದರೂ ಇರಬಹುದು, ಯಾವಾಗ ಸರ್ಕಾರಗಳಿಗೆ ಲಾಕ್ ಡೌನ್ .ಸೀಲ್ ಡೌನ್.ಕ್ವಾರಂಟೈನ್ ಎಲ್ಲ ವಿಫಲ ಎನ್ನುವುದು ಅರಿವಿಗೆ ಬರತೊಡಗಿತೋ ಆಗ ಕೋವಿಡ್ ಜೊತೆ ಬದುಕೋದನ್ನ ಕಲಿತುಕೊಳ್ಳಿ ಎನ್ನುವ ಹೇಳಿಕೆ ಕೊಟ್ಟು ಕೈ ತೊಳೆದು ಕೊಂಡಿತು.ಈಗ ಪ್ರಶ್ನೆ ಏನು ಅಂದರೆ ದೇಶದ ಜನ ಕರೋನ ಜೊತೆ ಹೇಗೋ ಬದುಕೇ ಬದುಕ್ತ ಇದ್ದ್ರು. ಆದ್ರೆ ಅವ್ರು ಬದುಕ್ದೆ ಇರೋ ಹಾಗೆ ಮಾಡಿದ್ದು ಯಾರು ? Once again Government and Media ಇವರುಗಳೇ ಜನಗಳ ಮನಸಲ್ಲಿ ತಲೆಗಳಲ್ಲಿ ನಿತ್ಯ ಕರೋನ ದ ಭಯ ತುರುಕಿ ತುರುಕಿ ಜನಗಳ ಶೀತ ನೆಗಡಿ ಕೆಮ್ಮು ಜ್ವರ ದಂತಹ ಸಣ್ಣ ಕಾಯಿಲೆ ಬಂದರು ಎದೆ ಒಡೆದುಕೊಂಡು ಸಾಯುವ ಹಂತಕ್ಕೆ ತಂದು ಬಿಟ್ಟಿದ್ದಾರೆ.

ಹಾಗಾದರೆ ಈ ಕೊವಿಡ್ ನ ಸಾವುಗಳಿಗೆ ಕಾರಣಗಳೇನು ? ಮೊದಲನೆಯದು ದೇಶದ ತುಂಬ ಮಾಧ್ಯಮಗಳು ಬಿತ್ತಿದ ಭಯ(ಡಾಕ್ಟರ್ ಗಳೇ ಎದೆ ಒಡ್ಕೊಳೋವಷ್ಟು). ಎರಡನೆಯದು ವೈದ್ಯಕಿಯ ಸೌಲಭ್ಯದ ಕೊರತೆ ಇವುಗಳ ಕಾರಣದಿಂದ ಸಾವಿನ ಪ್ರಮಾಣ ಹೆಚ್ಚಾಗಿದ್ದು ಎನ್ನುವ ಅಂಶವನ್ನು ಸಾರ್ವಜನಿಕರು ಗಮನಿಸಬೇಕು.

ಇಲ್ಲಿ ಓದುಗ ಮಿತ್ರರ ಗಮನಕ್ಕೆ ಒಂದಿಷ್ಟು ಕೊವಿಡ್ 19 ಬಗ್ಗೆ ಅಂಕಿ ಅಂಶಗಳಿವೆ..
ಭಾರತದಲ್ಲಿ ಒಟ್ಟು ಆಸ್ಪತ್ರೆಗಳ ಸಂಖ್ಯೆ Government -25 778
Privet – 43487 ಒಟ್ಟು-69265
ಬೆಡ್ ಗಳ ಸಂಖ್ಯೆ ಸರ್ಕಾರಿ ಆಸ್ಪತ್ರೆ ಗಳಲ್ಲಿ- 713986
ಖಾಸಗಿ-1185242 ಒಟ್ಟು-1899228 ರಿಂದ 19 29692 (ಹೆಚ್ಚುವರಿ)
ICU Bed ಗಳ ಸಂಖ್ಯೆ ಸರ್ಕಾರಿ ಆಸ್ಪತ್ರೆಗಳಲ್ಲಿ 35699 ಖಾಸಗಿ 59265 ಒಟ್ಟು 94961-(96485ಹೆಚ್ಚುವರಿ)
ವೆಂಟಿಲೇಟರ್ ಗಳ ಸಂಖ್ಯೆ ಸರ್ಕಾರಿ 17856 ಖಾಸಗಿ 29631 ಒಟ್ಟು 47481 (48242 ಹೆಚ್ಚುವರಿ)

ಕರೋನ ಸೋಂಕಿತರ ಸಂಖ್ಯೆ 769052 ಮರಣದ ಸಂಖ್ಯೆ 21144(ಈ ಲೇಖನ ಪೂರ್ಣಗೊಳಿಸುವ ಸಮಯಕ್ಕೆ)
Covid -19 ಒಂದು ವೈರಲ್ ರೋಗ ಇತರ ವೈರಲ್ ರೋಗಗಳಂತೆಯೇ ಜ್ವರ ಕೆಮ್ಮಿನ ರೂಪದಲ್ಲಿ ಮನುಷ್ಯರಲ್ಲಿ ಕಾಣಿಸಿಕೊಳ್ಳುತ್ತದೆ.ಇದಕ್ಕೆ ಯಾವುದೇ ಚಿಕಿತ್ಸೆ ಇಲ್ಲ ಎನ್ನುವುದು ಎಷ್ಟು ಸತ್ಯವೋ ಕರೋನ ಸೋಂಕಿತರೆಲ್ಲ ಸಾವಿಗೀಡಾಗುವುದಿಲ್ಲ ಎನ್ನುವುದೂ ಕೂಡ ಅಷ್ಟೇ ಸತ್ಯ.

ಹಾಗಿದ್ದರೂ ದೇಶದಲ್ಲಿ ಕೊವಿಡ್ ಡೆತ್ ಪ್ರಮಾಣ ಹೆಚ್ಚಾಗಲು ಕಾರಣಗಳೇನು ಎನ್ನುವ ಪ್ರಶ್ನೆಗೆ ಮುಖ್ಯ ಕಾರಣ ಹೀಗಿದೆ ಭಾರತದಲ್ಲಿ ಒಟ್ಟು ಆಸ್ಪತ್ರೆಗಳ ಸಂಖ್ಯೆ 69 ಸಾವಿರ ಚಿಲ್ಲರೆ ಅವುಗಳಲ್ಲಿ 43ಸಾವಿರ ಚಿಲ್ಲರೆ ಖಾಸಗಿ ಆಸ್ಪತ್ರೆಗಳು 25 ಸಾವಿರ ಚಿಲ್ಲರೆ ಸರ್ಕಾರಿ ಆಸ್ಪತ್ರೆ ಗಳು. ಕೊವಿಡ್ ಎನ್ನುವ ವೈರಸ್ ಭಾರತದಲ್ಲಿ ಹರಡುತ್ತಿದ್ದಂತೆ 95% ಖಾಸಗಿ ಆಸ್ಪತ್ರೆಗಳನ್ನು ಬಂದ್ ಮಾಡಲಾಯಿತು ಮತ್ತು ಬಹುತೇಕ ಖಾಸಗಿ ವೈದ್ಯರು ಕೊವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಮುಂದೆ ಬರಲಿಲ್ಲ ಇನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಇರುವ ದುಸ್ಥಿತಿ ವಿವರಿಸುವ ಅಗತ್ಯವೇ ಇಲ್ಲ ಅಲ್ಲಿ ಪೇಷ್ಂಟ್ ಗಳಿಗೆ ಚಿಕಿತ್ಸೆ ಬಿಡಿ ತಿರುಗಿ ನೋಡೋರೂ ಗತಿ ಇಲ್ಲ ಇವುಗಳ ಕಾರಣಗಳಿಂದ ಸಾವಿನ ಪ್ರಮಾಣ ಹೆಚ್ಚಾಗಿದೆಯೇ ಹೊರತು ನೇರ ಕೊವಿಡ್ ಪರಿಣಾಮದಿಂದ ಅಲ್ಲ.

ಕೊವಿಡ್ ನಿಜವಾಗಿಯೂ ಮಾರಣಾಂತಿಕ ವೈರಸ್ ಆಗಿದ್ದಿದ್ದ್ರೆ (ಪಾಸಿಟಿವ್ ಇರೋರೆಲ್ಲ ಸಾಯೋ ಹಾಗಿದ್ದ್ರೆ) ಇಷ್ಟೊತ್ತಿಗೆ ಭಾರತದಲ್ಲಿ ಸಾವಿನ ಪ್ರಮಾಣ ಸಾವಿರಗಳಲ್ಲಿ ಅಲ್ಲ ಲಕ್ಷ ಲಕ್ಷಗಳಲ್ಲಿ ಇರಬೇಕಿತ್ತು ಆದ್ರೆ ಹಾಗಿಲ್ಲ ಅದೊಂದು ಸಾಂಕ್ರಾಮಿಕ ರೋಗ ಸೂಕ್ತ ವೈದ್ಯಕೀಯ ವ್ಯವಸ್ಥೆ ಸಿಗದಿದ್ದಲ್ಲಿ ರೋಗಿ ಸಾಯಬಹುದು ನಿಜ ಆದ್ರೆ ಅದು ಎಲ್ಲರನ್ನೂ ಬಲಿ ತೆಗೆದುಕೊಳ್ಳುವ ರೋಗವಲ್ಲ .ಯಾರಲ್ಲಿ ದೈಹಿಕವಾಗಿ Immunity power ಕಡಿಮೆ ಇದೆಯೋ ಅವರ ಮೇಲೆ ಹೆಚ್ಚಿನ ಪರಿಣಾಮ ಬಿರುತ್ತೆ ಯಾರಲ್ಲಿ Immunity power ಹೆಚ್ಚಿಗೆ ಇದೆಯೋ ಅವರಿಗೆ ಒಂದು Viral infection ರೀತಿನಲ್ಲಿ ಬಂದು ಹೋಗುತ್ತೆ ಅಷ್ಟೇ. ನಿಮ್ಮ ಗಮನದಲ್ಲಿರಲಿ ಈಗಾಗಲೇ ಕರೋನ ಒಂದು Business ಆಗಿದೆ media ಗಳಿಗೆ TRP ಆಸ್ಪತ್ರೆ ಗಳಿಗೆ ಇನ್ನೊಂದ್ ರೀತಿ. Isolation ಗೆ ಒಳಗಾದ ವ್ಯಕ್ತಿ ಒಬ್ಬರು ಕೊಟ್ಟ ಮಾಹಿತಿ ಪ್ರಕಾರ ಒಂದು ವಾರಕ್ಕೆ ಅವರು ಆಸ್ಪತ್ರೆಗೆ ತೆತ್ತಿರುವ ಬಿಲ್ಲು 1.5 ಲಕ್ಷ ಅಲ್ಲಿ ಅವರಿಗೆ ಕೊಟ್ಟ ಟ್ರೀಟ್ಮೆಂಟು ದಿನಕ್ಕೆ ಒಂದು ಡ್ರಿಪ್ಸ್ .ಡೋಲೋ 650mg .vitamin C Tab.B complex cap. ಎರಡು ಹೊತ್ತಿನ ಊಟ ಒಂದು ಟೈಮ್ ಟೀ,ಎರಡು ಟೈಮ್ ಕಷಾಯ ಇಷ್ಟಕ್ಕೆ ಒಂದರಿಂದ ಒಂದುವರೇ ಲಕ್ಷ ಬಿಲ್ ಅಂದ್ರೆ ಕರೋನಾ ಎಂಥ ಲಾಭದಾಯಕ ಬಿಜಿನೆಸ್ ಆಗಿರಬಹುದು ? ಆಳುವ ವರ್ಗ ಪ್ರಜೆಗಳ ಕಾಳಜಿ ವಹಿಸದಿದ್ದರೆ ನಾಗರೀಕರೇ ತಮ್ಮ ಕಾಳಜಿ ತಾವೇ ವಹಿಸಿಕೊಳ್ಳಬೇಕಾದ ಅನಿವಾರ್ಯ ಇದೆ. ಆದ್ದರಿಂದ ದಯವಿಟ್ಟು ಜಾಗೃತರಾಗಿ.

ಕರೋನಾ ದಿಂದ ಖಚಿತವಾಗಿ ಸಾವು ಸಂಭವಿಸುವುದಿಲ್ಲ. ಹಾಗೊಂದು ವೇಳೆ ಸಾವು ಸಂಭವಿಸಿದರೆ ಕರೋನ ಜೊತೆ ಬೇರೆ ರೋಗಗಳೂ ಅವರಲ್ಲಿರಬಹುದಾದ ಸಾಧ್ಯತೆಗಳು ತುಂಬ ಹೆಚ್ಚಾಗಿವೆ ಉದಾಹರಣೆಗೆ BP.ಶುಗರ್.ಹೃದಯ ಸಂಬಂಧಿ ಕಾಯಿಲೆ.ಅಸ್ಥಮಾ ಇತ್ಯಾದಿ ಆ ಕಾರಣಗಳಿಂದ ಸಾವಿನ ಪ್ರಮಾಣ ಹೆಚ್ಚಾಗಿವೆ ಅನಗತ್ಯ ಗಾಬರಿ ಬೇಡ. ನೆಗಡಿ ಕೆಮ್ಮು ಜ್ವರ ದಂತಹ ಲಕ್ಷಣಗಳು ಕಂಡು ಬಂದಲ್ಲಿ ಕುಟುಂಬದಿಂದ ಸ್ನೇಹಿತರಿಂದ ಪ್ರತ್ಯೇಕವಾಗಿರಿ ವೈದ್ಯರ ಸಲಹೆ ಪಡೆದು ಮನೆಯಲ್ಲಿಯೆ ಉಪಚಾರ ಮಾಡಿಕೊಳ್ಳಿ ತೀರ ಉಸಿರಾಟದ ತೊಂದರೆ ಇತ್ಯಾದಿ ಹೆಚ್ಚಾದಲ್ಲಿ ಮಾತ್ರ Hospitalize ಆಗಿ ಎಲ್ಲಕಿಂತ ಮುಖ್ಯ ಧೈರ್ಯವಾಗಿರಿ ಸಾಧ್ಯವಾದಷ್ಟು ಸುದ್ದಿ ಮಾಧ್ಯಮಗಳಿಂದ ದೂರ ಇರಿ ಮಾಧ್ಯಮಗಳ ಸುದ್ದಿಗಳಿಂದನೆ ಜನಗಳು ಅರ್ಧ ಸತ್ತು ಹೋಗಿದ್ದಾರೆ ನೆನಪಿಡಿ ‘ಜೋ ಡರ್ ಗಯಾ ವೋ ಮರ್ ಗಯಾ’ ಕೊನೆಯದಾಗಿ ಓದುಗ ಮಿತ್ರರಲ್ಲಿ ವಿನಂತಿ ಎಂದರೆ ಕೊವಿಡ್ ನಿಂದ ಮೃತ ಪಟ್ಟವರ ಅಂತ್ಯ ಕ್ರೀಯೆ ನೆರವೇರಿಸುವ ಸಂದರ್ಭ ಬಂದಲ್ಲಿ ಧೈರ್ಯವಾಗಿ ಮುಂದೆ ಬಂದು ನೆರವೇರಿಸಿ. ಡೆಡ್ ಬಾಡಿಗಳಿಂದ ಕರೋನ ಹರಡಲ್ಲ.

ಬಹಳಷ್ಟು ಕಡೆಗಳಲ್ಲಿ ಕುಟುಂಬದವರೇ ತಮ್ಮ ಮನೆಯ ಸದಸ್ಯರ Dead body ಪಡೆದುಕೊಳ್ಳಲು ನಿರಾಕರಿಸುತ್ತಿರುವ ಘಟನೆಗಳನ್ನು ನೋಡುತ್ತ ಇದ್ದಿವಿ.ಯಾವ ಜೀವ ಬದುಕಿನುದ್ದಕ್ಕೂ ತನ್ನ ಮನೆ ತನ್ನವರು ತನ್ನನ್ನ ಪ್ರೀತಿಸೋರು ಅಂತ ತಿಳ್ಕೊಂಡು ಬದುಕಿರುತ್ತಾನೋ/ಳೋ ಕೊನೆಗೆ ಆ ತನ್ನವರಿಂದಲೇ ಆ ಜೀವ ತಿರಸ್ಕೃತಗೊಂಡು ನಾಯಿ ನರಿ ಪ್ರಾಣಿಗಳ ರೀತಿಯಲ್ಲಿ ಬೀದಿ ಹೆಣವಾಗುತ್ತಿರುವ ಸನ್ನಿವೇಶ ಗಳು ಕರೋನ ರೋಗಕ್ಕಿಂತ ಭೀಕರ.ಕರೋನಾ ವೈರಸ್ ಮನುಷ್ಯರನ್ನು ಸಾಯಿಸಲಿ ಅದನ್ನ ತಡೆಯುವುದು ನಮ್ಮಿಂದ ಅಸಾಧ್ಯ ಆದರೆ ಮನುಷತ್ವವನ್ನು ಸಾಯಿಸಲು ಅವಕಾಶ ಕೊಡುವುದು ಬೇಡ..

ರವೀಂದ್ರ ಎನ್ ಎಸ್ – ಲೇಖಕರು


 

ambedkar image

LEAVE A REPLY

Please enter your comment!
Please enter your name here