ವಿಜಯಪುರ: ಸೋಂಕಿತರ ಸಂಖ್ಯೆ 221 ಕ್ಕೆ ಏರಿಕೆ : ಇಂದು 16 ಜನ ಗುಣಮುಖ ರೋಗಿಗಳ ಬಿಡುಗಡೆ

0
224

ವಿಜಯಪುರ ಜೂ.11: ಜಿಲ್ಲೆಯಲ್ಲಿ ಈವರೆಗೆ ಒಟ್ಟು 221 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಜಿಲ್ಲಾಸ್ಪತ್ರೆಯಲ್ಲಿ 68 ರೋಗಿಗಳು ಕೋವಿಡ್-19 ಪಾಸಿಟಿವ್ ಸಕ್ರಿಯ ರೋಗಿಗಳಾಗಿದ್ದಾರೆ. ಇಂದು ಮತ್ತೆ 4 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. 16 ಗುಣಮುಖ ರೋಗಿಗಳು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ.

ಜಿಲ್ಲೆಯ ಸೋಂಕಿತರಲ್ಲಿ ರೋಗಿ ಸಂಖ್ಯೆ 6114 (35 ವರ್ಷದ ಪುರುಷ) ರೋಗಿ ಸಂಖ್ಯೆ 6115 (13 ವರ್ಷದ ಬಾಲಕಿ), ರೋಗಿ ಸಂಖ್ಯೆ 6116 (7 ವರ್ಷದ ಬಾಲಕ), ರೋಗಿ ಸಂಖ್ಯೆ 6117 (2 ವರ್ಷದ ಬಾಲಕಿ) ಇವರಿಗೆ ರೋಗಿ ಸಂಖ್ಯೆ – 5011 ಸಂಪರ್ಕದಿಂದ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಅವರು ತಿಳಿಸಿದ್ದಾರೆ.
ಅದರಂತೆ ರೋಗಿ ಸಂಖ್ಯೆ 3157 (22 ವರ್ಷದ ಪುರುಷ),ರೋಗಿ ಸಂಖ್ಯೆ 4603 (20 ವರ್ಷದ ಮಹಿಳೆ) ರೋಗಿ ಸಂಖ್ಯೆ 1177 (45 ವರ್ಷದ ಪುರುಷ) ರೋಗಿ ಸಂಖ್ಯೆ 1725 (30 ವರ್ಷದ ಪುರುಷ), ರೋಗಿ ಸಂಖ್ಯೆ 1726 (15 ವರ್ಷದ ಬಾಲಕಿ), ರೋಗಿ ಸಂಖ್ಯೆ 2283 (12 ವರ್ಷದ ಬಾಲಕ) ರೋಗಿ ಸಂಖ್ಯೆ 2420 (32 ವರ್ಷದ ಪುರುಷ), ರೋಗಿ ಸಂಖ್ಯೆ 2842 (35 ವರ್ಷದ ಮಹಿಳೆ), ರೋಗಿ ಸಂಖ್ಯೆ 2843 (18 ವರ್ಷದ ಯುವಕ) ರೋಗಿ ಸಂಖ್ಯೆ 3151 (4 ವರ್ಷದ ಬಾಲಕ) ರೋಗಿ ಸಂಖ್ಯೆ 3175 (2 ವರ್ಷದ ಬಾಲಕ), ರೋಗಿ ಸಂಖ್ಯೆ 3976 (68 ವರ್ಷದ ಪುರುಷ) ರೋಗಿ ಸಂಖ್ಯೆ 3974 (68 ವರ್ಷದ ಪುರುಷ) ರೋಗಿ ಸಂಖ್ಯೆ 4581 (40 ವರ್ಷದ ಪುರುಷ) ರೋಗಿ ಸಂಖ್ಯೆ 4809 (60 ವರ್ಷದ ಪುರುಷ) ರೋಗಿ ಸಂಖ್ಯೆ 4831 (70 ವರ್ಷದ ಪುರುಷ),ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ ವಿದೇಶ ಸೇರಿದಂತೆ ಇತರ ಪ್ರದೇಶಗಳಿಂದ 29,275 ಜನರು ಬಂದ ಬಗ್ಗೆ ವರದಿಯಾಗಿದ್ದು, ಇವರ ಮೇಲೆ ತೀವ್ರ ನಿಗಾ ಇಡಲಾಗಿದೆ. ಒಟ್ಟು 221 ಕೋವಿಡ್ -19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. 8659 ಜನರು 28 ದಿನಗಳ ಐಸೋಲೇಶನ್ ಅವಧಿ ಪೂರ್ಣಗೊಳಿಸಿದ್ದಾರೆ. 20375 ಜನರು (1 ರಿಂದ 28 ದಿನಗಳ) ರಿಪೋರ್ಟಿಂಗ್ ಅವಧಿಯಲ್ಲಿದ್ದು, ಈವರೆಗೆ ಒಟ್ಟು 6 ಜನ ಕೋವಿಡ್-19 ರೋಗಿಗಳು ಮೃತಪಟ್ಟಿದ್ದಾರೆ. 147 ಜನರು ಕೋವಿಡ್-19 ರೋಗದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, 68 ಜನರು ಆಸ್ಪತ್ರೆಯಲ್ಲಿರುವ ಕೋವಿಡ್-19 ಸಕ್ರಿಯ ರೋಗಿಗಳಾಗಿದ್ದಾರೆ. ಈವರೆಗೆ 26594 ಜನರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿದ್ದು, 26275 ಜನರ ನೆಗೆಟಿವ್ ವರದಿ ಬಂದಿದೆ. ಇನ್ನೂ 98 ಜನರ ಗಂಟಲು ದ್ರವ ಮಾದರಿ ಪರೀಕ್ಷಾ ವರದಿ ಬರಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.


 

ambedkar image

LEAVE A REPLY

Please enter your comment!
Please enter your name here