ಐದನೇ ತರಗತಿಯವರೆಗೆ ಮಾತ್ರ ಆನ್ ಲೈನ್ ಶಿಕ್ಷಣ ರದ್ದು: ಸಚಿವ ಸುರೇಶ ಕುಮಾರ

0
74

ಬೆಂಗಳೂರು ಜೂ.11. ಏಳನೇ ತರಗತಿಯವರೆಗಿನ ಆನ್‍ಲೈನ ಶಿಕ್ಷಣವನ್ನು ನೀಡುವಂತಿಲ್ಲ ಎಂದು ಸರಕಾರ ತಿರ್ಮಾನಿಸಿದೆ ಎಂಬಂತಹ ಸುದ್ದಿಯನ್ನು ಶಿಕ್ಷಣ ಸಚಿವ ಸುರೇಶ ಕುಮಾರ ತಳ್ಳಿಹಾಕಿದ್ದಾರೆ. ನರ್ಸರಿ ಮತ್ತು ಒಂದರಿಂದ ಐದನೇ ತರಗತಿಯವರೆಗೆ ಮಾತ್ರ ಆನ್‍ಲೈನ್ ತರಗತಿಗಳನ್ನು ನಿಷೇಧಿಸಲು ಸರಕಾರ ನಿರ್ಧರಿಸಿದೆ ಎಂದು ಸಚಿವರು ಟ್ವೀಟ್ ಮಾಡಿದ್ದಾರೆ. ಏಳನೇ ತರಗತಿವರೆಗೆ ಆನ್‍ಲೈನ್ ಕ್ಲಾಸಗಳಿಗೆ ಅವಕಾಶ ನೀಡಬಾರದು ಎಂದು ಕೆಲ ಸಂಪುಟ ಸಚಿವರ ಸಲಹೆಯಾಗಿದೆ ಎಂದು ತಮ್ಮ ಟ್ವೀಟ್‍ನಲ್ಲಿ ಸಚಿವ ಸುರೇಶಕುಮಾರ ಸ್ಪಷ್ಟಪಡಿಸಿದ್ದಾರೆ.

LEAVE A REPLY

Please enter your comment!
Please enter your name here