ವಿಜಯಪುರ: ಲಂಚ ಸ್ವೀಕರಿಸುವ ವೇಳೆ ಸಹಾಯಕ ಸಂಚಾರಿ ವ್ಯವಸ್ಥಾಪಕ ಎಸಿಬಿ ಬಲೆಗೆ

0
295

ವಿಜಯಪುರ ಮೇ. 20 : ವಿಜಯಪುರ ಕೇಂದ್ರಬಸ್ ನಿಲ್ದಾಣ ಆವರಣದಲ್ಲಿ ವಿದ್ಯುತ್ ಕೇಬಲ್ ಅಳವಡಿಕೆಗೆ ಸಂಬಂಧಪಟ್ಟಂತೆ 20 ಸಾವಿರ ರೂ.ಗಳ ಬೇಡಿಕೆ ಇಟ್ಟು, 10 ಸಾವಿರ ರೂ.ಗಳ ಲಂಚ ಸ್ವೀಕರಿಸುವ ಕುರಿತಂತೆ ಫೀರ್ಯಾದಿದಾರರ ದೂರಿನ ಆಧಾರದ ಮೇಲೆ ಸಹಾಯಕ ಸಂಚಾರ ವ್ಯವಸ್ಥಾಪಕ ಶ್ರೀ ರಾಜಶೇಖರ ಗಜಾಕೋಶ ಇವರನ್ನು ಹಣ ಸ್ವೀಕರಿಸುವ ಸಂದರ್ಭದಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ರೆಡ್‍ಹ್ಯಾಂಡ್ ಆಗಿ ಹಿಡಿದಿದ್ದು, ಸದರಿಯವರನ್ನು ದಸ್ತಗಿರಿ ಮಾಡಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಭ್ರಷ್ಟಾಚಾರ ನಿಗ್ರಹ ದಳದ ಉಪ ಅಧೀಕ್ಷಕರು ತಿಳಿಸಿದ್ದಾರೆ.

ಈ.ಕ.ರಾ.ರ.ಸಾ ಸಂಸ್ಥೆಯ ಕೇಂದ್ರ ಬಸ್ ನಿಲ್ದಾಣದಲ್ಲಿ ಸಿವ್ಹಿಲ್ ಇಂಜಿನಿಯರರಾದ ಶ್ರೀ ಸಂಗಣ್ಣ ರವರು ವಿದ್ಯುತ್ ಕೇಬಲ್ ಅಳವಡಿಸುವ ಕುರಿತು ಕೆ.ಎಸ್.ಆರ್.ಟಿ.ಸಿ ಆವರಣದ ಬಾವಿಯ ಬಳಿ ಹಡ್ಡಿದ್ದು, ಸದರಿ ಕಾಮಗಾರಿ ಬಗ್ಗೆ ತನ್ನ ಗಮನಕ್ಕೆ ಏಕೆ ತಂದಿರುವುದಿಲ್ಲ ಎಂದು ವಿಜಯಪುರ ಕೇಂದ್ರ ಬಸ್ ನಿಲ್ದಾಣದ ಸಹಾಯಕ ಸಂಚಾರ ವ್ಯವಸ್ಥಾಪಕರಾದ ಶ್ರೀ ರಾಜಶೇಖರ ಎಸ್ ಗಜಾಕೋಶ, ಇವರು ವರದಿಯನ್ನು ಕಳುಹಿಸುವುದಾಗಿ ತಯಾರಿಟ್ಟುಕೊಂಡು ರೂ. 20,000/-ಕ್ಕೆ ಬೇಡಿಕೆಯನ್ನು ಇಟ್ಟು ಕೊನೆಗೆ ರೂ. 10,000/- ಅನ್ನು ಕೊಡಲು ಸೂಚಿಸಿರುತ್ತಾರೆ ಎಂದು ಪಿರ್ಯಾದಿದಾರರಾದ ಕೇಂದ್ರ ಬಸ್ ನಿಲ್ದಾಣದ ಸಾರಿಗೆ ನಿಯಂತ್ರಕ ಶ್ರೀ ಪುಂಡಪ್ಪ ಧರ್ಮಣ್ಣ ರೆಡ್ಡಿ ಅವರು ಠಾಣೆಗೆ ದೂರನ್ನು ಇಂದು ದಿನಾಂಕ 20-05-2020 ರಂದು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಇಂದು ಸದರಿ ಆಪಾದಿತ ಸಹಾಯಕ ಸಂಚಾರ ವ್ಯವಸ್ಥಾಪಕರು ಶ್ರೀ ರಾಜಶೇಖರ ಎಸ್ ಗಜಾಕೋಶ ಇವರು ಲಂಚದ ಹಣವನ್ನು ಸ್ವೀಕರಿಸುತ್ತಿರುವಾಗ ಭ್ರಷ್ಟಾಚಾರ ನಿಗ್ರಹ ದಳ ಬಲೆ ಬೀಸಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದು, ಶ್ರೀ ಗಜಾಕೋಶ ಅವರನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಪೊಲೀಸ್ ಉಪಾಧೀಕ್ಷಕರಾದ ಎಲ್.ವೇಣುಗೋಪಾಲ ರವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಪೊಲೀಸ್ ನಿರೀಕ್ಷಕರವರುಗಳಾದ ಶ್ರೀ ಎಸ್.ಆರ್ ಗಣಾಚಾರಿ ಮತ್ತು ಶ್ರೀ ಹರೀಶ್‍ಚಂದ್ರ ಹಾಗೂ ಸಿಬ್ಬಂದಿಗಳಾದ ಶ್ರೀ ಮಹೇಶ ಪೂಜಾರಿ, ಶ್ರೀ ಅಶೋಕ ಸಿಂಧೂರ, ಶ್ರೀ ಸುರೇಶ ಜಾಲಗೇರಿ, ಶ್ರೀ ಮದನಸಿಂಗ ರಜಪೂತ, ಈರಣ್ಣ ಕನ್ನೂರ ವಾಹನ ಚಾಲಕರಾದ ಶ್ರೀ ಸದಾಶಿವ ಕೋಟ್ಯಾಳ, ಶ್ರೀ ಚನ್ನನಗೌಡ ಯಾಳವಾರ, ಶ್ರೀ ಮಾಳಪ್ಪ ಸಲಗೊಂಡ ರವರು ದಾಳಿಯಲ್ಲಿ ಭಾಗವಹಿಸಿದ್ದರು ಎಂದು ಅವರು ತಿಳಿಸಿದ್ದಾರೆ.


advertisement

LEAVE A REPLY

Please enter your comment!
Please enter your name here