ವಿಜಯಪುರ: ಸೀಲ್‍ಡೌನ್ ಎರಿಯಾ ಹೊರತುಪಡಿಸಿ, ಮೇ 4ರ ನಂತರ ಹಂತ-ಹಂತವಾಗಿ ವಿನಾಯತಿ -ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ

0
280

ವಿಜಯಪುರ ಮೇ.02: ವಿಜಯಪುರ ನಗರ,ಕಂಟೇನ್ಮೆಂಟ್ ವಲಯಗಳನ್ನು ಹೊರತುಪಡಿಸಿ ಜಿಲ್ಲೆಯಾದ್ಯಂತ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಾರ್ಗಸೂಚಿಯನ್ವಯ ವಿವಿಧ ಚಟುವಟಿಕೆಗಳಿಗೆ ವಿನಾಯತಿಯನ್ನು ಇದೇ ಮೇ 4ರ ನಂತರ ನೀಡಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಜೋಲ್ಲೆಯವರು ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಇಂದು ವಿವಿಧ ಇಲಾಖೆಯ ಅಧಿಕಾರಿ ಮತ್ತು ಜಿಲ್ಲೆಯ ಶಾಸಕರೊಂದಿಗೆ ಕೋವಿಡ್-19 ಮುನ್ನೆಚ್ಚರಿಕಾ ಸಭೆ ನಡೆಸಿದ ಅವರು ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿಯನ್ವಯ ಮತ್ತು ಮಾನ್ಯ ಮುಖ್ಯಮಂತ್ರಿಗಳ ವಿಡಿಯೋ ಸಂವಾದ ಮೂಲಕ ನಿರ್ದೇಶನದಂತೆ ವಿಜಯಪುರ ನಗರದಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ಕಂಡುಬಂದ ಹಿನ್ನಲೆಯಲ್ಲಿ ಹಂತ-ಹಂತವಾಗಿ ವಿನಾಯತಿಗೆ ಕ್ರಮಕೈಗೊಳ್ಳಲಾಗುವುದು. 4 ಕಂಟೇನ್ಮೆಂಟ್ ವಲಯಗಳಲ್ಲಿ ಈ ಹಿಂದಿನಂತೆ ಸೀಲ್‍ಡೌನ್ ಜಾರಿಯಲ್ಲಿರಲಿದ್ದು, ಜನರ ಓಡಾಟಕ್ಕೆ ಅವಕಾಶವಿರುವುದಿಲ್ಲ. ಅದರಂತೆ ವಿವಿಧ ತಂಡಗಳ ಮೂಲಕ ಅಗತ್ಯ ವಸ್ತುಗಳ ಪುರೈಕೆ ಮತ್ತು ಸ್ವಚ್ಛತಾ ಕಾರ್ಯ ನಿರಂತರ ನಡೆಯಲಿದೆ ಎಂದು ಅವರು ತಿಳಿಸಿದರು.

ಮಾನ್ಯ ಮುಖ್ಯಮಂತ್ರಿಗಳ ನಿರ್ದೇಶನದಂತೆ ಕಂಟೇನ್ಮೆಂಟ್ ವಲಯ ಮತ್ತು ವಿಜಯಪುರ ನಗರ ಹೊರತುಪಡಿಸಿ ಜಿಲ್ಲೆಯಾದ್ಯಂತ ವ್ಯಾಪಾರ ವಹಿವಾಟು, ಕೃಷಿ, ತೋಟಗಾರಿಕೆ, ಎಪಿಎಂಸಿ ಚಟುವಟಿಕೆ, ಬಸ್‍ಗಳನ್ನು ಹೊರತುಪಡಿಸಿ ನಾಲ್ಕುಚಕ್ರ, ದ್ವಿಚಕ್ರ ವಾಹನ (ಕಡ್ಡಾಯವಾಗಿ ಮಾಸ್ಕ ಧರಿಸಿ, ಅಗತ್ಯತೆಗೆ ಅನುಗುಣವಾಗಿ) ಓಡಾಟಕ್ಕೆ ಮಾತ್ರ ಅವಕಾಶ ಇರಲಿದೆ. ವೈದ್ಯಕೀಯ ಚಿಕಿತ್ಸೆಗಳಿಗೆ ಯಾವುದೇ ನಿರ್ಭಂಧ ಇರುವುದಿಲ್ಲ ಎಂದ ಅವರು ಮಹಾರಾಷ್ಟ್ರ ಹೊರತುಪಡಿಸಿ ಗೋವಾದಿಂದ ಬರುವ ಕಾರ್ಮಿಕರಿಗೆ ಪ್ರವೇಶಾವಕಾಶ ಕಲ್ಪಿಸುವ ಕುರಿತು ಅವಶ್ಯಕ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ವಿಜಯಪುರ ನಗರದಲ್ಲಿ ಇಂದಿನಿಂದ ಶ್ವಾಸಕೋಶ ತೊಂದರೆ ಸಂಬಂಧಿತ, ಗಂಭೀರ ರೀತಿಯ ಸಂಬಂಧಿತ ಪ್ರಕರಣಗಳ ಚಿಕಿತ್ಸೆಗೆ ಅನುಕೂಲವಾಗುವಂತೆ ಗಂಟಲುದ್ರವ ಮಾದರಿ ಪರೀಕ್ಷಾ ಪ್ರಯೋಗಾಲಯ ಆರಂಭಿಸಲಾಗುತ್ತಿದೆ. ಇದರಿಂದ ದಿನಕ್ಕೆ 25 ರಿಂದ 30 ಗಂಟಲು ದ್ರವಗಳ ಮಾದರಿ ಪರೀಕ್ಷೆಗೆ ಸಹಕಾರಿಯಾಗಲಿದೆ. ಅದರಂತೆ ಜಿಲ್ಲಾಸ್ಪತ್ರೆ ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಿರುವುದರಿಂದ ಅನ್ಯ ವೈದ್ಯಕೀಯ ಸೇವೆ ಕಲ್ಪಿಸಲು ಪ್ರತ್ಯೇಕ ವಿಭಾಗ ತೆರೆಯುವ ಕುರಿತಂತೆ ಕ್ರಮಕೈಗೊಳ್ಳಲು ಸಂಬಂಧಸಿದ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಈವರೆಗೆ 1990 ಜನರು ವಿದೇಶ ಮತ್ತು ಇತರೇ ಕಡೆಯಿಂದ ಬಂದ ಬಗ್ಗೆ ವರದಿಯಾಗಿದ್ದು ತೀವ್ರ ನಿಗಾ ಇಡಲಾಗಿದೆ. ಈವರಗೇ 424 ಜನರು 28 ದಿನಗಳ ಐಸೋಲೇಶನ್ ಅವಧೀ ಪೂರ್ಣಗೊಳಿಸಿದ್ದು, 1564 ಜನರು 15 ರಿಂದ 28 ದಿನಗಳ ರಿಪೂರ್ಟಿಂಗ್ ಅವಧಿಯಲ್ಲಿದ್ದಾರೆ, ಈವರಗೇ 46 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು, 11 ಜನ ಗುಣಮುಖರಾಗಿದ್ದಾರೆ. 2119 ಜನರ ಗಂಟಲುದ್ರವ ಮಾದರಿ ಪರೀಕ್ಷೆಯಲ್ಲಿ 1934 ಜನರ ಗಂಟಲುದ್ರವ ಮಾದರಿ ವರದಿ ನೆಗೆಟಿವ್ ಬಂದಿದೆ. ಹಾಗೂ 141 ಜನರ ಗಂಟಲು ದ್ರವ ಮಾದರಿ ವರದಿ ಬರಬೇಕಿದೆ. ಅದರಂತೆ ಪಾಸಿಟಿವ್ ಪ್ರಕರಣಗಳ ಸಂಪರ್ಕ ಪತ್ತೆ ಮೇಲೆ ತೀವ್ರನಿಗಾ ಇಡುವಂತೆ ಸೂಚನೆ ನೀಡಿದರು.


Advertisement



 

LEAVE A REPLY

Please enter your comment!
Please enter your name here