ಬಡಜನರ ಅನುಕೂಲಕ್ಕಾಗಿ ಆಸ್ಪತ್ರೆಗಳ ಮೂಲಕ ಚಿಕಿತ್ಸೆಗೆ ಅವಕಾಶ

0
223

ವಿಜಯಪುರ ಎ.18: ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳು ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಆಸ್ಪತ್ರೆಗಳನ್ನು ಶಂಕಿತ ಕೋವಿಡ್-19 ಹಾಗೂ ದೃಢಪಟ್ಟ ಪ್ರಕರಣಗಳ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗಳನ್ನು ನಿಗದಿಪಡಿಸಿರುವುದರಿಂದ ಸದ್ಯ ಜಿಲ್ಲಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ಈಗಾಗಲೇ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರೆಸಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ.

ಸಾಮಾನ್ಯ, ದ್ವಿತೀಯ ಹಂತದ ಚಿಕಿತ್ಸೆಗಳನ್ನು ಹಾಗೂ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಇಲ್ಲದಿರುವ ಚಿಕಿತ್ಸೆಗಳಿಗಾಗಿ (ಸಿ.ಜಿ.ಹೆಚ್.ಎಸ್ ದರಗಳಿಗನುಗುಣವಾಗಿ) ಜಿಲ್ಲೆಯ ಲುಕ್‍ಮನ್ ಯೂನಾನಿ ಮೆಡಿಕಲ್ ಕಾಲೇಜ್ ಹಾಗೂ ಆಸ್ಪತ್ರೆ, ಅಲ್ ನಬಿ ಆಸ್ಪತ್ರೆ, ಬಿ.ಎಲ್.ಡಿ.ಇ ಶ್ರೀ ಬಿ.ಎಂ ಪಾಟೀಲ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ, ಯಶೋಧರಾ ಸುಪರ್ ಸ್ಪೆಶಾಲಿಟಿ ಆಸ್ಪತ್ರೆ, ಹುಸೇನ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ, ವಾಸುದೇವ ಆಸ್ಪತ್ರೆ, ಅನುಗೃಹ ಕಣ್ಣಿನ ಆಸ್ಪತ್ರೆ, ಅಲ್ ಆಮೀನ್ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ, ಕೆಂಬಾವಿ ಕಣ್ಣಿನ ಆಸ್ಪತ್ರೆ, ಬಸನಗೌಡ ಪಾಟೀಲ ಸುನಗ ಮೆಮೋರಿಯಲ್ ಆಸ್ಪತ್ರೆ, ಡಾ.ಬಿದರಿ ಅಶ್ವಿನಿ ಆಸ್ಪತ್ರೆ, ಬಿಜಾಪೂರ ಕಿಡ್ನಿ ಫೌಂಡೇಶನ್, ಸಂಜೀವಿನಿ ಸುಪರ್ ಸ್ಪೆಶಾಲಿಟಿ ಆಸ್ಪತ್ರೆ, ಯಶೋಧಾ ಆಸ್ಪತ್ರೆ, ಅಕ್ಕಿ ಆಸ್ಪತ್ರೆ, ಚೌಧರಿ ಆಸ್ಪತ್ರೆ, ಡಾ.ಮುನೀರ ಬಾಂಗಿ ಆಸ್ಪತ್ರೆ, ಶ್ರೀ ಭಾಗ್ಯವಂತಿ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ, ಶ್ರೀ ಸಾಯಿ ಆಸ್ಪತ್ರೆ, ಸ್ಪರ್ಶಾ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ, ಕಿಡ್ನಿಕೇರ್ ಆಸ್ಪತ್ರೆ, ಮುಧೋಳ ಆಸ್ಪತ್ರೆ, ಪಾಟೀಲ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ಈ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಒದಗಿಸುವಂತೆ ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.


 

ambedkar image

LEAVE A REPLY

Please enter your comment!
Please enter your name here