ಎಲ್ಲಾ ಸೆಲೆಬ್ರಿಟಿಗಳು ಸರಕಾರಕ್ಕೆ ಡೊನೆಶನ್ ಕೊಡಲು ಮುಂದೆ ಏಕೆ ಬರಲ್ಲಾ…!?

0
269

ಸರಕಾರಕ್ಕೆ ಅಂದ್ರೆ ರಾಜ್ಯವಿರಲಿ ಕೇಂದ್ರವಿರಲಿ ಎಲ್ಲಾ ಸೆಲೆಬ್ರಿಟಿಗಳು ಡೊನೆಶನ್ ಕೊಡಲು ಮುಂದೆ ಬರಲ್ಲಾ ಎಂಬುದನ್ನು ಹುಡಕುತ್ತಾ ಹೊರಟರೆ ನಿಮಗೆ ಇದರಲ್ಲಿ ಅಶ್ಚರ್ಯ ವಿಷಯ ಸಿಗುತ್ತದೆ. ಹೇಗೆ ಎಂಬುದು ಒಂದ್ಸಲ ಕಣ್ಣಾಡಿಸಿ.

ಮೊನ್ನೆ ಪಿ ಎಮ್ ನರೇಂದ್ರ ಮೋದಿಯವರು ಒಂದ ಅಕೌಂಟ್ ಮಾಡಿ ಹಣಕ್ಕಾಗಿ ಸಹಾಯ ಹಸ್ತ ಮಾಡಿದರು ಅದರ ಜೊತೆ ರಾಜ್ಯದಿಂದ ಯಡ್ಡಿ ಸಾಹೇಬರು ಕೂಡಾ ಹಣಕ್ಕಾಗಿ ಜನರ ಮೊರೆ ಹೋದ್ರು. ಇದು ಎಲ್ಲರಿಗೂ ಗೊತ್ತಿರುವ ವಿಷಯ. ಆದ್ರೆ ಕೇಂದ್ರಕ್ಕೆ ಮತ್ತು ರಾಜ್ಯಕ್ಕೆ ಎಷ್ಟು ಜನ ಸೆಲೆಬ್ರಿಟಿಗಳು ಸಹಾಯ ಮಾಡಲು ಮುಂದೆ ಬಂದ್ರು ಎಂಬುದನ್ನು ನೋಡಿದ್ರೆ ಕೇವಲ ಬೆರಳಣಿಕೆಯಷ್ಟು ಮಾತ್ರ ಸಿಗುತ್ತಾರೆ. ಅದರಲ್ಲಿ ಹೆಚ್ಚು ಸದ್ದು ಮಾಡಿದ್ದು ಕೇಂದ್ರಕ್ಕೆ ಅಕ್ಷಯಕುಮಾರ ಮತ್ತು ಕ್ರಿಕೇಟರ್ ವೀರಾಟ್ ಕೊಹ್ಲಿ ಮತ್ತು ರಾಜ್ಯದಿಂದ ಪುನೀತ್ ರಾಜ್‍ಕುಮಾರ್ ಮಾತ್ರ ಕಣ್ಮುಂದೆ ಕಾಣುತ್ತಾರೆ. ಅದ್ರೆ ಇದೇನು ಉಳಿದ ಸೆಲೆಬ್ರಿಟಿಗಳು ಎಲ್ಲಿ ಹೋದ್ರು ಅಂತಿರಾ ? ಕೋಟ್ಯಾಂತರ ಅಭಿಮಾನ ಬಳಗವೇ ಇದ್ದಾರೆ ಒಂದು ಮಾತು ಬಿಟ್ರೆ ಸಾಕು ಕೋಟಿ ಕೋಟಿ ಹಣ ಸರಕಾರಕ್ಕೆ ಬರುತ್ತದೆ ಸುಮ್ಮ ಸುಮ್ಮನೆ ಟ್ವಿಟ್ ಮಾಡುವ ಸೆಲೆಬ್ರಿಟಿಗಳು ಮಾತ್ರ ಸಹಾಯ ಹಸ್ತದ ಬಗ್ಗೆ ಕರೋಣಾ ವೈರಸ್ ಬಗ್ಗೆ ತುಟಿ ಬಿಚ್ಚಿಲ್ಲಾ ಅನ್ನೊದು ಮಾತ್ರ ಸತ್ಯ. ಇನ್ನೊಂದು ವಿಷಯ ಅಂದ್ರೆ ದಕ್ಷಿಣದ ಸೆಲೆಬ್ರಿಟಿಗಳು ನಾಪತ್ತೆಯಾಗಿದ್ದಾರೆಂದೇ ಹೇಳಬೇಕು ಅಲ್ವಾ ?

ಹೋಗಲಿ ಇವರು ಯಾಕೆ ಹಣ ಕೊಡಲು ಮುಂದೆ ಬರಲಿಲ್ಲಾ ಅಂದ್ರೆ ಇವರು ವರ್ಷಕ್ಕೊಮ್ಮೆ ಆದಾಯದ ಟ್ಯಾಕ್ಸ್ ಕಟ್ತಾರೆ ಹೀಗಾಗಿ ಕೊಡಲು ಮುಂದೆ ಬರಲ್ಲಾ. ಇನ್ನೊಂದು ಅಂದ್ರೆ, ಯಾವುದೇ ಸರಕಾರದ ಪರ ಮಾತಾಡಿದ್ರೆ ಎಲ್ಲಿ ತಮ್ಮ ಸೆಲೆಬ್ರಿಟಿಗೆ ದಕ್ಕೆ ಬರುತ್ತೊ ಎಂದು ತಿಳಿದು ಸಹಾಯನೂ ಬೇಡಾ ಸಹವಾಸವೂ ಬೇಡಾ ಅಂತಾ ಮುಂದೆ ಬರಲ್ಲಾ. ಹಾಗಾದರೆ, ಅವರೇಕೆ ಕೊಟ್ರು ಎಂಬ ಪ್ರಶ್ನೆ ಬಂದೇ ಬರುತ್ತದೆ‌. ಆಗ ಅಲ್ಲಿ ನಮಗೆ ಸಿಗುವ ಉತ್ತರ ಅವರು ಸರಕಾರದ ಸವಲತ್ತು ಪಡಕೋತ್ತಾರೆ ಅಂದ್ರೆ ಅವರು ಸರಕಾರದ ಜಾಹಿರಾತುಗಳನ್ನು ಪ್ರತಿನಿದಿಸಿ ಕೋಟಿ ಕೋಟಿ ಸಂಭಾವನೆ ಪಡಕೋತಾರೆ ಅದಕ್ಕಾಗಿ ಎಲ್ಲರಿಗಿಂತ ಮುಂದೆ ಸಹಾಯದ ಜೊತೆ ಪಬ್ಲಿಸಿಟಿ ಕೂಡಾ ತಗೋತಾರೆ. ಸೋ ಹೀಗಾಗಿ ಸವಲತ್ತುಗಳನ್ನು ಉಳಿಸಿಕೊಳ್ಳಲಾದರೂ ಸರಕಾರಗಳಿಗೆ ಸಹಾಯ ಮಾಡಲೇಬೇಕಾಗುತ್ತದೆ.

ದೊಡ್ಡ ದೊಡ್ಡ ಸ್ಯಾಂಡಲವುಡ್ ಕಾಲಿವುಡ್ ಟಾಲಿವುಡ್ ಬಾಲಿವುಡ್ ಸೆಲೆಬ್ರಿಟಿಗಳ ಒಂದ ಪಟ್ಟಿನೇ ಇದೆ ಇಲ್ಲಿ ಸೆಲೆಬ್ರಿಟಿಗಳಾದ ಹೆಸರು ಬೇಡಾ ಎಷ್ಟು ಕೊಟರು ಹೋಗಲಿ ಜನರ ಬಗ್ಗೆ ಕಾಳಜಿ ಮಾಡಿದ್ರೆ ಕೂಡಾ ಕಾಳಜಿ ಮಾಡಬೇಕು ಅಲ್ವಾ ?

ಇನ್ನು ಕೆಲವು ಸೆಲೆಬ್ರೆಟಿಗಳಲ್ಲಿ ಬಹುಬಾಷಾ ನಟ ಪ್ರಕಾಶ ರಾಜ್ ಊಟದ ವ್ಯವಸ್ಥೆ ಮಾಡಿದ್ದಾರಂತೆ ಮತ್ತು ಅದರ ಜೊತೆ ಬಾಲಿವುಡ್ ಸಲ್ಮಾನ್ ಖಾನ ಕೂಡಾ ಬಾಲಿವುಡ ಕಾರ್ಮಿಕರಿಗೆ ಊಟದ ವ್ಯವಸ್ಥೆ ಮಾಡುತ್ತಿದ್ದಾರೆಂದು ಪತ್ರಿಕೆಯ ಸುದ್ಧಿ ಮಾತ್ರ ಅದು ಎಷ್ಟು ಸತ್ಯವೋ ಸುಳ್ಳೊ ಗೊತ್ತಿಲ್ಲಾ.

ಪಬ್ಲಿಸಿಟಿ ವಿಷಯದಲ್ಲಿ ನಾನು ಮುಂದು ನೀನು ಮುಂದು ಎನ್ನುವ ತಲೆಹರಟೆಯಂತಹ ಪ್ರಚಾರ ಪ್ರೀಯರ ಮಾತ್ರ ನಾಪತ್ತೆಯಾಗಿದ್ದಾರೆ FB ನೂ ಇಲ್ಲಾ ಮತ್ತು ಟ್ವೀಟದಲ್ಲೂ ಇಲ್ಲಾ.

ಅದರಂತೆ ಇನ್ನು ಕ್ರಿಕೇಟ್ ಸೆಲೆಬ್ರಿಟಿಗಳ ವಿಷಯಕ್ಕೆ ಬರೋಣಾ ಕೇವಲ ವಿರಾಟ್ ಕೊಹ್ಲಿ ಮಾತ್ರ ಮುಂದೆ ಬಂದರು. ಉಳಿದವರು ಯಾರೂ ಬರಲಿಲ್ಲಾ. ಇವರ ವಾರ್ಷಿಕ ಆದಾಯ ನೋಡಿದ್ರೆ ಜಾಗತೀಕ ಶ್ರೀಮಂತರ ಪಟ್ಟಿಯಲ್ಲಿ ಇವರ ಹೆಸರು ಬರುತ್ತದೆ. ಆದ್ರೂ ಸಹಾಯ ಹಸ್ತ ಮಾಡಲು ಮುಂದೆ ಬರಲ್ಲಾ ಅನ್ನೊದು ಮಾತ್ರ ಸತ್ಯ.

ಇನ್ನು ಇಂಡಸ್ಟ್ರಿ ಬಗ್ಗೆ ಮಾತಾಡೋದೇ ಬೇಡಾ ಅವರು ಕೂಡಾ ಹಾಗೇಯೇ ತಮ್ಮ ಸರಕಾರ ಬಂದಾಗ ಹಣ ಕೊಡಲು ಮುಂದೆ ಬರ್ತಾರೆ ಬೇರೆ ಸರಕಾರಗಳು ಅಧಿಕಾರಕ್ಕೆ ಬಂದಾಗ ತರೆಯಮರೆಯಲ್ಲಿ ಇರುತ್ತಾರೆ. ಸರಕಾರಗಳಿಗೆ ವಾರ್ಷಿಕವಾಗಿ ಟ್ಯಾಕ್ಸ್ ಕಟ್ತಿವಿ ಮತ್ಯಾಕೆ ಕಟ್ಟಬೇಕು ಅನ್ನೊದು ಕೂಡಾ ಇರುತ್ತದೆ. ಆದ್ರೆ, ಇನ್ನೊದು ಹೇಳೋದು ಇದೆ ಅದೇನು ಅಂದ್ರೆ ಸಹಾಯ ಮಾಡಿದ್ರೆ ವಾರ್ಷಿಕವಾಗಿ ಕಟ್ಟುವ ಟ್ಯಾಕ್ಸದಲ್ಲಿ ಕೂಡಾ ವಿನಾಯ್ತಿ ಕೂಡಾ ಪಡಕೋಬಹುದು ಆದ್ರೂ ಅವರು ಸಹಾಯ ಹಸ್ತಕ್ಕಾಗಿ ಮುಂದೆ ಬರಲ್ಲಾ ಅದು ಯಾಕೆ ಇರಬೇಕು ಅನ್ನೊದು ಒಂದು ಚರ್ಚಾ ವಿಷಯವಾದರೂ ಇನ್ನೊಂದು ವಾಸ್ತವ ಸತ್ಯ ಎಂದು ಹೇಳಬಹುದು.

ಅಷ್ಟೇ ಅಲ್ಲಾ, ಸರಕಾರದ ಪರವಾಗಿ ಗುತ್ತಿಗೆದಾರರು ಕೂಡಾ ಸಹಾಯ ಹಸ್ತಕ್ಕೆ ಮುಂದೆ ಬರುತ್ತಿಲ್ಲಾ. ಕೇವಲ ಅತ್ಯಲ್ಪ ಚುನಾವಣಾ ತಯಾರಿಯ ಗುತ್ತಿಗೆದಾರರು ತಮ್ಮ ಲೆವೆಲ್ಲಿಗೆ ತಕ್ಕಂತೆ ಮಾತ್ರ ಅಲ್ಲಲ್ಲಿ ಊಟದ ವ್ಯವಸ್ಥೆ ಮಾಡಿ ಓಟ ಬ್ಯಾಂಕ್ ಉಳಿಸಿಕೊಳ್ಳುವ ಪ್ರಯತ್ನ ಮಾಡೇ ಮಾಡ್ತಾರೆ. ಇವರು ತಮ್ಮ ನಾಯಕನಿಗೆ ಮಿನಿಸ್ಟರ್ ಸಿಕ್ಕ ಖುಷಿಯಲ್ಲಿ ಲಕ್ಷಾಂತರ ರೂಪಾಯಿಗಳಲ್ಲಿ ಜಾಹೀರಾತು ನೀಡ್ತಾರೆ. ಇನ್ನು ನೋಡಬೇಕು ಬರ್ತಡೆ ಖುಷಿಯಲ್ಲಿಯೂ ಕೂಡಾ ಸ್ಥಳಿಯ ಮಂತ್ರಿಗಳನ್ನು ಶಾಸಕರನ್ನು ಹೊಗಳಲು ನಾ ಮುಂದೆ ಎಂದು ಪುಟಗಟ್ಟಲೇ ಜಾಹೀರಾತು ನೀಡ್ತಾರೆ. ಆದ್ರೆ ಇಂತಹ ಸಂದರ್ಭದಲ್ಲಿ ಮಾತ್ರ ಸರಕಾರಕ್ಕೆ ಸಹಾಯ ಮಾಡಲು ಮುಂದೆ ಬರಲ್ಲಾ.

ಇನ್ನೊಂದು ವಿಷಯವೆಂದ್ರೆ ಕೇಂದ್ರದಲ್ಲಿನ ಅಥ್ವಾ ರಾಜ್ಯದಲ್ಲಿನ ಸರ್ಕಾರದ ಯೋಜನೆಗಳನ್ನು ನುಂಗಿ ಹಾಕೋ ಗುತ್ತಿಗೆದಾರರು ಎಂದೂ ಮುಂದೆ ಬರಲ್ಲಾ ಅನ್ನೊದು ಮಾತ್ರ ಸತ್ಯ. ಅದಕ್ಕೆ ಉತ್ತಮ ಉದಾಹರಣೆ ಅಂದ್ರೆ ಕೇಂದ್ರದ ಅಂಬಾನಿ ಮತ್ತು ಅದಾನಿ. ಇವರು ಯಾಕೆ ಸಹಾಯ ಮಾಡಲ್ಲಾ ಅಂದ್ರೆ ಇವರು ಸರಕಾರವನ್ನು ಖರಿದಿಸೋ ಜನ ಅದಕ್ಕಾಗಿ ಮುಂದೆ ಬರಲ್ಲಾ.

ಇನ್ನು ಪಕ್ಷಗಳಿಗೆ ನೀಡುವ ವಂತಿಗೆಯನ್ನು ಸರಕಾರಕ್ಕೆ ನೀಡಿದರೆ ಸಾವಿರಾರು ಕೋಟಿಯಾಗುತ್ತದೆ. ಆದ್ರೆ ಸರಕಾರಗಳು ಅದಕ್ಕೆ ಅವಕಾಶ ಮಾಡಿಕೊಡಲ್ಲಾ. ಇದರ ಬಗ್ಗೆ ಎಲ್ಲಾ ಪಕ್ಷಗಳು ಒಂದೇ ಅಜೆಂಡಾ ಹೊಂದಿರುತ್ತವೆ.

ಅದು ಏನೇ ಇರಲಿ ಸೆಲೆಬ್ರೆಟಿಗಳು. ಗುತ್ತಿಗಾದರರು ಹಾಗೂ ಪಕ್ಷಗಳಿಗೆ ಕದ್ದು ಮುಚ್ಚಿ ಕೊಡುವ ವ್ಯಕ್ತಿಗಳು ಮುಂದೆ ಬಂದರೆ ಅದಕ್ಕಾಗಿ ಸಾವಿರಾರು ಕೋಟಿಯಾಗುತ್ತದೆ. ಆದ್ರೆ ಅದು ನಮ್ಮಲ್ಲಿ ಸಾಧ್ಯವಿಲ್ಲಾ. ಎಲ್ಲಾ ಪಕ್ಷಗಳ ಹಿಡನ್ ಅಜೆಂಡಾ ಒಂದೇ ಆಗಿರುತ್ತದೆ ಎಂಬುದನ್ನು ಜನರಿಗೆ ಗೊತ್ತಾಗಬೇಕು ಅಷ್ಟೇ.

ಸುರೇಂದ್ರ ಉಗಾರೆ, ನ್ಯಾಯವಾದಿಗಳು

ambedkar image

LEAVE A REPLY

Please enter your comment!
Please enter your name here