ಮೌನದ ಪ್ರೀತಿಯಲಿ ನೆನಪಾದ ನಿನ್ನ ಗುಲಾಬಿ

0
43

ಹೃದಯದ ಹಳೆಯ ಜೀವವೇ, ಪ್ರೀತಿ ಕುರುಡಾದದ್ದು, ಪ್ರೀತಿಗೆ ದ್ವೇಷವಿಲ್ಲ, ಅಸೈಯೆ ಇಲ್ಲ. ಪ್ರೀತಿಗೆ ಯಾವುದೂ ಬೇಸರವಾಗುವುದಿಲ್ಲ. ಈ ಜಗತ್ತಿನಲ್ಲಿ ಎನೆಲ್ಲ ಸ್ವೀಕರಿಸುವುದು ಪ್ರೀತಿ ಒಂದೆ. ಅದಕ್ಕೆ ಪ್ರೀತಿಯನ್ನು ಅಳೆಯಲಿಕ್ಕೆ ಯಾವ ಮೀಟರ ಇಲ್ಲ. ಇಂದು ನಮ್ಮಿಬ್ಬರ ಮೌನದಲ್ಲಿ ಆ ಪ್ರೀತಿಯ ಹಳೆಯ ನೆನಪುಗಳು ಆಗಾಗ ಮರುಕಳಿಸುತ್ತಿವೆಯಲ್ಲ ! ನಿನಗೆ ಹಳೆಯ ನೆನಪುಗಳು ಮರುಕಳಿಸುತ್ತವೆಯೋ ಇಲ್ಲವೋ ಗೊತ್ತಿಲ್ಲ.ನನಗಂತೂ ಆ ಹಳೆಯ ನೆನಪುಗಳು ಸದಾ ಕಾಡುತ್ತಲೆ ಇರುತ್ತವೆ. ನಾನೇ ನಿನಗಿಂತ ಅದೃಷ್ಟವಂತಳು. ಆ ಹಳೆಯ ಮಧುರ ಭಾವನೆಗಳನ್ನು ಮರೆಯಲು ಪ್ರಯತ್ನಿಸುತ್ತಿಲ್ಲ. ನೀನು ಎಂಥ ಹುಚ್ಚನಪ್ಪ ಬದುಕಿನ ಮಧುರಾನುಭವ ಹಳೆಯದರಲ್ಲಿಯೆ ಅಡಗಿದೆ.
2014 ಪೆಬ್ರುವರಿ 14 ರಂದು ನಿನ್ನ ಹಳೆಯ ನೆನಪು ಕಾಡಿತು.ಅದು ಎಷ್ಟೊಂದು ಮಧುರವಾದದ್ದು! ಎಷ್ಟೊಂದು ಭಯಾನಕವಾದದ್ದು ! ನೆನಸಿಕೊಂಡರೆ ಇಘಿರುವ ದುಃಖವೆಲ್ಲ ಮಾಯವಾಗಿ ಬಿಡುತ್ತದೆ.ನಾನು ನೆನಪುಗಳನ್ನು ಯಾಕೆ ಉಳಿಸಿಕೊಂಡಿದೆನೆ ಎಂಬುದು ಗೊತ್ತು?ಈಗಿರುವ ದುಃಖವನ್ನೆಲ್ಲ ಮರೆತುಬಿಡಲು ನಿನ್ನ ನೆನಪು ಉಳಿಸಿಕೊಂಡಿರುವೆ.ವರ್ಷ ಪೂರ್ತಿ ನನ್ನ ಸುತ್ತ ಸುಳಿದು,ನನ್ನ ಪ್ರೀತಿಗಾಗಿ ವಿಲಿವಿಲಿ ಒದ್ದಾಡಿದಿ ನೆನಪಿದೆಯಾ?
ಆ ಪೆಬ್ರುವರಿ 14 ರಂದು ಮೊಟ್ಟ ಮೊದಲು ನೀನು ಕೊಟ್ಟ ಗುಲಾಬಿಯ ಹೂವಿನ ನೆನಪು ಬಂದಿತು. ಆ ಹೂವಿನಲ್ಲಿ ನಿನ್ನ ಪ್ರೀತಿ ಇರಲಿಲ್ಲ. ಪ್ರೀತಿ ಇದ್ದರೂ ಬಹಳ ಸ್ವಲ್ಪೇ ಇತ್ತು. ನಿನ್ನ ಪ್ರೀತಿಗಿಂತ ಅದರಲ್ಲಿ ನಿನ್ನ ಭಯದ ಭಾವನೆಗಳು ಹೆಚ್ಚಾಗಿದ್ದವು. ನೀನು ಗುಲಾಬಿ ಕೊಡಲು ಯಾಕೆ ಅಷ್ಟೊಂದು ಭಯಪಟ್ಟೆ ಎಂದು ತಿಳಿಯಲಿಲ್ಲ.
ಪೆಬ್ರುವರಿ 14 ಪ್ರೇಮಿಗಳ ದಿನ. ಪ್ರೇಮಿಗಳಿಗೆ ಸ್ವತಂತ್ರವಾದ ದಿನ ಈ ದಿನವೂ ನೀನು ಭಯಪಟ್ಟು ಗುಲಾಬಿ ಕೊಟ್ಟೆಯಲ್ಲ ! ಈ ವಿಷಯ ನನ್ನ ಗೆಳತಿಯರಿಗೆ ಹೇಳಿದಾಗ ಅವರಿಗೊಂದು ಒಳ್ಳೆಯ ಜೊಕ್ಸ್ ಆಯಿತು. ನಿನ್ನನ್ನು ಪೆದ್ದ-ಗಿದ್ದ ಅಂತ ಬೈದರು. ಅವರೆಲ್ಲ ನಿನ್ನನ್ನು ಕಾಡಿಸಬೇಕೆಂದು ಹೊಂಚು ಹಾಕಿ ಕುಳಿತ್ತಿದ್ದರು. ನಾನು ಅವರಿಗೆ ಸ್ವಲ್ಪ ಸ್ಪೂರ್ತಿ ಕೊಟ್ಟಿದ್ದರೆ ನಿನ್ನ ಕಾಡಿಸಿ, ಕಾಡಿಸಿ ನನ್ನ ಸುತ್ತ ಸುಳಿಯದಂತೆ ಮಾಡುತ್ತಿದ್ದರು. ಇದರಿಂದ ನಿನ್ನ ಮನಸ್ಸು ನೊಂದುಕೊಳ್ಳಬಹುದೆಂದು ನಾನು ಅವರಿಗೆಲ್ಲ ಬೈದು ಬಿಟ್ಟೆ. ಅವರು ಅಷ್ಟಕ್ಕೆ ಸುಮ್ಮನಾದರು.ನಾನು ಕೆಲವೊಂದು ಹುಡುಗರಿಗೆ ರಾಕಿ ಕಟ್ಟಿದಾಗ ನನಗೂ ಕಟ್ಟಬಹುದೆಂದು ನೀನು ತಪ್ಪಿಸಿಕೊಂಡು ಹೋದದ್ದು, ನೀನಾದಿನ ತಪ್ಪಿಸಿಕೊಳ್ಳುವ ರೀತಿ ಕಂಡು ಆಗಾಗ ನನ್ನ ಗೆಳತಿಯರೆಲ್ಲ ಜೀವ ತಿಂದು ಹಾಕುತ್ತಿದ್ದರು.ನೀನು ತಪ್ಪಿಸಿಕೊಂಡು ಹೋಗುವ ಅವಶೈಕತೆ ಇರಲಿಲ್ಲ.ಯಾಕೆಂದರೆ ನಿನಗೆ ರಾಖಿ ಕಟ್ಟುತ್ತಿರಲಿಲ್ಲ.ಗುಲಾಬಿ ಕೊಡಬೇಕೆಂದವನಿಗೆ ರಾಖಿ ಕಟ್ಟಲು ಸಾಧ್ಯವೇ ? ಈಗ ಅದನೆಲ್ಲ ನೆನಪಿಸಿಕೊ, ಅದರಲ್ಲಿರುವ ಆನಂದ,ನಿರಾಶೆ ಎಷ್ಟು ಮಧುರ ನೋಡು.
ಇಂದು ನೀನು ಜಗಳವಾಡಿ ಹೋಗಿರಬಹುದು.ನಿನ್ನ ಗುಲಾಬಿಯ ಹೂವು ನನ್ನ ಜೊತೆಯಲಿ ಇನ್ನೂ ಇದೆ.ನೀನು ಕೊಟ್ಟ ಗುಲಾಬಿ ಇಂದಿಗೂ ನಳನಳಿಸಿತ್ತಿದೆ.ಅಷ್ಟೆ ತಾಜಾತನದಿಂದ ಕೂಡಿದೆ.ಆದರೆ ನಿನ್ನ ನೋಡಿದರೆ,ನೀನೆ ಎಷ್ಟೊಂದು ಬೇಗ ಬಾಡಿ ಹೋಗಿರುವಿ.ನಿನ್ನ ಹೂವಿನಲ್ಲಿರುವ ರಸಿಕತೆ,ನಿನ್ನೆದೆಯಲ್ಲಿ ಯಾಕೆ ಇಲ್ಲೆಂಬುದೇ ನನಗೊಂದು ದೊಡ್ಡ ಚಿಂತೆ.
ಪೆಬ್ರುವರಿ 14 ರಂದು ನೀನು ಮತ್ತೊಂದು ಗುಲಾಬಿ ತೆಗೆದುಕೊಂಡು ಬರಬಹುದೆಂದು ಕಾಯ್ದೆ. ನೀನು ಬರದಿದ್ದರೆ,ನಾನೇ ಬರಬೇಕೆಂದುಕೊಂಡೆ, ಮತ್ತೆ ಬೇಡವೆನಿಸಿತು. ಯಾಕೆಂದರೆ, ನಿನಗಿಂತಲೂ ಹೆಚ್ಚಿನ ಸ್ವಾಭಿಮಾನ ನನಗಿದೆ. ನಾವಿಬ್ಬರೂ ಈಗ ದೂರವಾಗಿರುವ ವಿಷಯ ಗುಟ್ಟಾಗಿ ಉಳಿದಿಲ್ಲ. ಈ ವಿಷಯ ತಿಳಿದು ನಿನಗಿಂತಲೂ ಪೆದ್ದನಾಗಿರುವನೊಬ್ಬ ಮೊನ್ನೆ 14 ನೇಯ ತಾರೀಖು ಗುಲಾಬಿ ಕೊಡಲು ಬಂದಿದ್ದ. ಅವನ ಮುಖಕ್ಕೆ ಉಗಿದು ಕಳಿಸಬೇಕೆಂದು ಮಾಡಿದೆ. ಅದೇಕೋ ಮನಸ್ಸು ಒಪ್ಪಲಿಲ್ಲ. ಅವನಿಗೆ ನೋವಾಗದ ಹಾಗೆ ಸ್ವಲ್ಪ ಉಗಿದೆ. ಅದರಲ್ಲಿಯೇ ಅವನು ಎಷ್ಟೊಂದು ಖುಷಿ ಪಟ್ಟ. ನಿಮ್ಮ ಹುಡುಗರ ಜಾತಿನೇ ಹೀಗಪ್ಪ. ನೋವಾಗದ ಹಾಗೆ ಎಷ್ಟು ಉಗಿದರೂ ಉಗಿಸಿಕೊಳ್ಳುವಿರಿ. ನಾವು ಹಾಗಲಪ್ಪ ಹುಡುಗಿಯರು ಬಹಳ ಸೂಕ್ಷ್ಮವಾಗಿ ವಿಚಾರಿಸುತ್ತೇವೆ. ಮಾತು ಸಾಕಪ್ಪ.
ನಾನು ನಿನಗಾಗಿ ಮುಂದಿನ ಪೆಬ್ರುವರಿ 14ರವರೆಗೆ ಕಾಯತ್ತೇನೆ ಬಾ. ಪ್ರೀತಿ ಅಂದರೆ ಗುಲಾಬಿ ಇದ್ದಂತೆ ಅದರಲ್ಲಿ ಮುಳ್ಳು ಉಂಟು ಹೂವು ಉಂಟು. ನೀನು ಹೀಗೆ ದೂರ ದೂರ ಹೋದರೆ, ನನಗೆ ಮತ್ತೆ ಯಾರಾದರೂ ಗುಲಾಬಿ ಕೊಡಲು ಬರುತ್ತಾರೆ. ನನಗೆ ಸಾವಿರ ಜನ ಗುಲಾಬಿ ಕೊಡಲು ಬರಬಹುದು. ಆದರೆ ನಿನಗೆ ಯಾರೂ ಬರುವುದಿಲ್ಲ. ಯಾಕೆಂದರೆ, ನೀನು ನನಗೆ ಗುಲಾಬಿ ಕೊಟ್ಟಿರುವ ವಿಷಯ ಪ್ರಪಂಚಕ್ಕೆ ತಿಳಿದು ಹೋಗಿದೆ. ನಿನ್ನೆದೆಯ ಮೌನರಾಗ ಮುರಿದು ಬೇಗ ನನ್ನ ಮುಡಿಗೊಂದು ಗುಲಾಬಿ ಮುಡಿಯ ಬಾ. ಆ ಮೊದಲಿನ ಪ್ರೇಮ ಈಗೂ ಇರಲಿ ಮುಂದೆಯೂ ಇರಲಿ. ಜನ್ಮ ಜನ್ಮಾಂತರದಲ್ಲಿಯೂ ಇರಲಿ. ದೇವರು ನಿನಗೆ ಇನ್ನೊಂದು ಗಿಲಾಬಿ ಹೂವು ತಂದು ಕೊಡುವಂತ ಬುದ್ದಿ ಕೊಡಲಿ.
ನಿನ್ನ ವಾತ್ಸಲ್ಯ.

LEAVE A REPLY

Please enter your comment!
Please enter your name here